Saturday, May 24, 2014

ನಿಸ್ವಾರ್ಥವಿರಲಿ...

ನಿಸ್ವಾರ್ಥವಿರಲಿ ನಿನ್ನ ನೆರವಲಿ, ಪರೋಪಕಾರದಲಿ.!
ಕಾಯದಿರು ಫಲ ನಿರೀಕ್ಷೆಯಲಿ...
ಮಾಡಿದ ಕರ್ಮವು ಕಳೆದುಹೋಗುವುದು..!
ಮನನವಿರಲಿ, ಬಿಟ್ಟ ಬಾಣವು ಎಂದೆಂದೂ
ಪುನಃ ಬತ್ತಳಿಕೆಗೆ ಮರಳಿಬರದು..!!

ಎಲ್ಲರಿಗೂ ಆದರ್ಶ ನೀನಾಗಿ
ನಿನ್ನ ಕಾಯಕವ ನೀಮಾಡುತ
ಮುನ್ನಡೆಯಬೇಕು ಎಂದೂ ಕಂಗೆಡದೆ..!
ಬಾರದ ಮಳೆಗೆ ಮರುಗುತ್ತಾ ತಲೆಮೇಲೆ
ಕೈ ಹೊತ್ತು ಕುಳಿತರೆ ಬರವೇ ನಿನಗೆ..!!

ದಿಟ್ಟ ನಡೆಯಿರಲಿ, ನೇರ ನುಡಿಯಿರಲಿ,
ಅನ್ಯ - ಪರರೆಂಬ
ತಾರತಮ್ಯವಿರದಿರಲಿ ಎಂತೆಂದರೆ;
ಪ್ರತಿಪಲಿಸಬೇಕು ನಿನ್ನ ವ್ಯಕ್ತಿತ್ವ
ಕಠೋರ, ತೀಕ್ಷ್ಣವಾದರೂ ಪ್ರಿಯವಾಗುವ ಅಮೂಲ್ಯ ವಜ್ರದಹಾಗೆ..!!

ನಿನ್ನೆಲ್ಲಾ ಸಹಾಯಗಳ ನೆನಪುಗಳನು
ಗಂಟುಕಟ್ಟಿ ದೂರದ ಜಗದಲಿಹೂತಿಟ್ಟು ಮರೆತುಬಿಡು..!
ದಯೆಯೇ ಧರ್ಮದ ಮೂಲವೆಂದೆನುವಂತೆ
ನಿನ್ನ ಮೇಲೆ ನೀನೇ ದಯೆತೋರಿದಾಗಲಷ್ಟೇ
ಪ್ರೇಮಜ್ಯೋತಿಯ ಬೆಳಗುತ್ತಾ
ಧರ್ಮ ಮಾರ್ಗದಲಿ ಮುನ್ನುಗ್ಗಬಹುದು ಎಳೆ ಮಗುವಂತೆ...!!

4 comments:

Badarinath Palavalli said...

ಎಲ್ಲ ದಾನಗಳ ಹಿಂದೆಯೂ ನಿಸ್ವಾರ್ಥತೆ ಇದ್ದರೆ ಅದಕ್ಕೆ ಆಗಲೇ ಸಾರ್ಥಕತೆ.
ಒಳ್ಳೆಯ ಸಾಲುಗಳು:
"ನಿನ್ನ ಮೇಲೆ ನೀನೇ ದಯೆತೋರಿದಾಗಲಷ್ಟೇ
ಪ್ರೇಮಜ್ಯೋತಿಯ ಬೆಳಗುತ್ತಾ
ಧರ್ಮ ಮಾರ್ಗದಲಿ ಮುನ್ನುಗ್ಗಬಹುದು ಎಳೆ ಮಗುವಂತೆ...!!"

ಚಿನ್ಮಯ ಭಟ್ said...

ಚಂದದ ಸಂದೇಶ ಮೇಡಮ್..

ಪ್ರತಿಪಲಿಸಬೇಕು ನಿನ್ನ ವ್ಯಕ್ತಿತ್ವ
ಕಠೋರ, ತೀಕ್ಷ್ಣವಾದರೂ ಪ್ರಿಯವಾಗುವ ಅಮೂಲ್ಯ ವಜ್ರದಹಾಗೆ
ಇಶ್ಟವಾಯಿತ್ತು :)

Unknown said...

thanks chinmay....:-)

Unknown said...

thank you so much sir..:-)