Wednesday, June 18, 2014

ಎಲ್ಲಿದೆ ನನ್ನ ಮನೆ...



ಎಲ್ಲಿದೆ ನನ್ನ ಮನೆ...??               
ಯಾರು ನನ್ನವರು..??
 
ಈಗಲಾದರೂ ಹೇಳು ದೇವ
ನಿನ್ನ ಗಂಡನ ಮನೆಯೇ
ನಿನ್ನದೆಂದು ಹೇಳಿ
ಕಟುಕರಿಗೆ ನನ್ನ ಕೊರಳಿಟ್ಟು
ಹೆತ್ತವಳೇ ಸಂಭ್ರಮಿಸಿದಳಲ್ಲಾ!!
ತವರು ಯಾಕಲ್ಲಾ ನನ್ನಮನೆ..??
 
ಮಗಳೇ ಎಂದು ಕರೆದೊಯ್ದು
ಮಾತುಮಾತಿಗೂ ಇದೆಯೇ
ಕಲಿತದ್ದೆಂದು ಹೀಯಾಳಿಸಿ,
ಪೀಡಿಸಿ, ಹಿಂಸಿಸಿ
ಉಪವಾಸ ಕೆಡುವಿದರಲ್ಲಾ!!
ಇವರು ಯಾಕಲ್ಲಾ
ನನ್ನವರು..??
 
ಉಳಿದವನೊಬ್ಬ ನನ್ನವ
ಕಂಠಪೂರ್ತಿ ಕುಡಿದು
ಬಿದ್ದು ಹೊರಳಿ ಒದ್ದಾಡಿ
ಬಂದು ಹೊಲಸುಲಿದು
ಜುಟ್ಟಿಡಿದು ಒದೆಯುವನಲ್ಲಾ!!
ಪತಿ ಯಾಕಲ್ಲಾ ಪರದೈವ..??
 
ಇಷ್ಟೆಲ್ಲದರ ಮಧ್ಯೆ ನೋವೊಂದೆಡೆ,
ಬಾಯಲ್ಲಿ ಅಯ್ಯೋ ಎಂದು
ಬೇರೆಲ್ಲೋ ಏನಿದೆಯೋ
ಎನ್ನುವ ಜಗವೊಂದೆಡೆ
ಕುಗ್ಗಸಿ ಸುಡುತಿದೆಯಲ್ಲಾ!!
ಹೇಳು ಎಲ್ಲಿದೆ ನನ್ನಮನೆ..??
 
ನೋಡು ಈ ಪುಟ್ಟ ಕೈಗಳು
ಮಾತ್ರ ನನ್ನವು...
ಬೃಹತ್ ವೃಕ್ಷದಂತೆ
ಆಸರೆಯನಿತ್ತಿವೆ ಬಾಳಲಿ...
ನನ್ನದೊಂದು ಪುಟ್ಟ "ಸೂರು"
ಅದರ ಎದೆಗೂಡಲಿ......

1 comment:

Badarinath Palavalli said...

ದಿನಂಪ್ರತಿ ವಾಹಿನಿಗಳಲ್ಲಿ ಸ್ತ್ರೀ ಶೋಷಣೆ ಮತ್ತು ಸಾವುಗಳ ಸರಮಾಲೆ ನೋಡಿ ಮನಸ್ಸು ಕಸಿವಿಸಿಗೊಂಡಿದೆ.
ವ್ಯಥೆಯೇ ಮೈವೆತ್ತಂತಹ ಕವಿತೆ.