Saturday, October 31, 2015

ಮಿಂಚುಗಣ್ಣಿನ ಕವಿ...

ಮಿಂಚುಗಣ್ಣಿನ ಕವಿ 
ಗೀಚುತ್ತಾನೆ ಕಾಲ್ಬೆರಳಲ್ಲೇ
ಗಿಡಮರ ಬಳ್ಳಿಗಳ
ನಿದ್ದೆಗೆಟ್ಟು ಬೆಳೆಸುತ್ತಾನೆ
ಮಾವು, ಹುಣಸೆ, ಹಲಸುಗಳ
ಹೀಚು ಕಾಯ ಹಿಚುಕದೆ
ಸುತ್ತಲೂ ಸುತ್ತೀ ಸುತ್ತೀ
ಬೆಚ್ಚನೆ ಕಾವಿಟ್ಟು  ಹಣ್ಣಾಗಿಸುತ್ತಾನೆ
ತನ್ನವಳ ಹೃದಯವ ಹಣ್ಣಾಗಿಸುತ್ತಾನೆ......



No comments: