Saturday, November 8, 2014

ತುಟಿ ಬಿಚ್ಚಿ ಹೇಳದ...



ತುಟಿ ಬಿಚ್ಚಿ ಹೇಳದ
ಮನಗಳ
ಬೆಚ್ಚನೆಯ
ಭಾವಗಳ ಮಿಲನಕೆ
ಹುಣ್ಣಿಮೆಯ ಬೆಳದಿಂಗಳು
ಹೆಣೆದಿತ್ತು
ಸೋಬಾನೆ ಹಾಡ....

ಕುಡಿಮೀಸೆ ಚೆಲುವನ
ನೋಟಕೆ
ದಿಕ್ಕೆಟ್ಟು, ಅವಳ
ಎದೆಹೊಕ್ಕ ಕೋಗಿಲೆ
ಉಸಿರಿಡಿದು ಹಾಡಿತು
ಒಂದೇಸಮನೆ ತಾನಿತಂದಾನ....

ಅವಳಂದ ಚಂದ..
ಅವ ತುಂಟ ಬಂಡ..
ಬಿಡದೆ ಬಂದಿಸಿದ
ಕರವಿಡಿದು ಬರಸೆಳೆದು
ಮುಂಗುರುಳ ಸರಿಸಿ
ಬೇಡಿದ ಮುತ್ತಿನಹಾರ....

ಬಲು ದಾರಾಳಿಯವಳು
ಮೌನ ಬಂಗಾರಿ,
ನಕ್ಕು ಓಡಿದಳು
ಕೈ ಕಿತ್ತು
ಮುತ್ತಿನ ಕೊಪ್ಪರಿಗೆಯನ್ನೇ
ಕೈಗಿಟ್ಟು...
ಇರುವೆಗಳ ಬಾಯಲ್ಲೂ ಜೇನಿತ್ತು....
 

3 comments:

Badarinath Palavalli said...

"ಬಲು ದಾರಾಳಿಯವಳು
ಮೌನ ಬಂಗಾರಿ"
ಏನೋ ನೆನಪಾಯಿತು!!!!
ಮರೆತ ಆ ಒಂದು ಪುಟ.

ಒಮ್ಮೆ ನಿಮ್ಮ ಪತಿ ದೇವರ ಮುಂದೆ ಸುಶ್ರಾವ್ಯವಾಗಿ ಹಾಡಿಬಿಡಿ!

ಚಿನ್ಮಯ ಭಟ್ said...

ಚಂದದ ಸಾಲುಗಳು ಅಕ್ಷತಾ ಅವ್ರೇ :) :).....ಇಷ್ಟವಾಯಿತು... ಕೊನೆಯಲ್ಲಿ ಬರುವ ಸೋಬಾನೆ ಹಾಡ, ತಾನಿತಂದಾನ,ಇರುವೆಗಳ ಬಾಯಲ್ಲೂ ಜೇನಿತ್ತು....ಗಳು ಬಹಳ ಸುಂದರವಾಗಿ ಮೂಡಿಬಂದಿದೆ..ಬರೆಯುತ್ತಿರಿ..
ನಮಸ್ತೆ

ಮನಸಿನಮನೆಯವನು said...

"ಚಲುವ ನೋಟಕ್ಕೆ ದಿಕ್ಕೆಟ್ಟು ಎದೆಹೊಕ್ಕ ಕೋಗಿಲೆ... " ಚಂದದ ಕವಿತೆ