Friday, April 25, 2014

ಅಮೃತಧಾರೆ...

ಮೈತುಂಬಿ ಜಲಲೆಯು
ವೈಯ್ಯಾರದಿ ನಡೆದಿಹಳು
ಕುಲಕುತ್ತಾ, ಬಳುಕುತ್ತಾ
ಹಾವಂತೆ.....
ಯಾರ ಹಂಗಿಲ್ಲದೇ
ಉಸಿರಾಗಿ ಪೊರೆವಳು
ಕೋಟಿ ಜನುಮವನೂ
ತಾಯಂತೆ.....
ಸಹ್ಯಾದ್ರಿಯಿಂದ ಇವಳ
ಕಾಡಿ ಬೇಡಿಯಾದರೂ
ನನ್ನಂಗಳಕೆ ತರುವಾಸೆ
ಭಗೀರಥನಂತೆ.....
ಯಾವ ದೇವರೋ
ಏನವನ ಸೃಷ್ಟಿಯೋ
ಸರಿಸಾಟಿ ಬೇರಿಲ್ಲ ಈ
ಅಮೃತಧಾರೆಯಂತೆ....

4 comments:

ಡಾ.ಶಿವಾನಂದ ಕುಬಸದ said...

ತುಂಬ ಚೆನ್ನಾಗಿದೆ.. ನೀವು ಬ್ಲಾಗ್ ಪ್ರಾರಂಭಿಸಿದ್ದು ಸಂತೋಷ... ಶುಭವಾಗಲಿ..

Badarinath Palavalli said...

ಬೇಂದ್ರೆ ಅಜ್ಜ 'ಇಳಿದು ಬಾ ತಾಯೇ' ಎಂದು ಪ್ತಾರ್ಥಿಸಿದಂತೆ, ತಮ್ಮ ಈ ಕವನವು ಗಂಗಾವತರಣವನ್ನು ಹನಿ ಹನಿಯಾಗಿ ಉಪಾಸನೆ ಮಾಡುತ್ತಿದೆ.

Unknown said...

ಬಹಳ ಧನ್ಯವಾದಗಳು ಶಿವಾನಂದ sir..

Unknown said...

ಬಹಳ ಧನ್ಯವಾದಗಳು ಬದರಿ sir..