Saturday, April 26, 2014

ಭಾವ ಸಾಗರದಲ್ಲಿ...

 
ಅಬ್ಬರಿಸಿದೆ ಈ ಹೃದಯ
ಮೈ ಮನಗಳ,
ಶಾಂತತೆಯ ಎಲ್ಲೆಮೀರಿ..
ಹೃದಯವೋ, ಒಡಲಾಳದಿ ಅಡಗಿ
ರೊಚ್ಚೆದ್ದ ಭಾವನೆಗಳ ಸಾಗರವೋ
ನೇಸರನ ಪ್ರಚೋದನೆಯೋ...
 
ಸುನಾಮಿ ಅಲೆಯಂತೆ
ಉಬ್ಬರಿಸಿ ಚಾಚುತ್ತಿದೆ
ಕರಣಗಳ ಪ್ರೀತಿಯತ್ತ..
ಅಲೆಯೋ, ಮನದಾಳದಿ ಬಲಿತು
ತೊಳಲಿರುವ ಕಾಮನೆಗಳ ಅಳಲೋ
ವಿರಹ ವೇದನೆಯೋ....
 
ಪ್ರವಹಿಸುತಿದೆ ರಭಸದಿ
ಕಡಲೊಡಲ ಮುತ್ತಿನಮಾಲೆ
ತೊಯ್ದಿಹಳು ಪ್ರೇಮಸಿಂಚನದಿ ಕುಸುಮಬಾಲೆ..
ಆತ್ಮಮಂಥನದ ಸುಳಿಯಲ್ಲಿ
ಮತ್ತದೇ ದ್ವಂದ್ವ,
ಕಂಪನವಿದು ವ್ಯಾಮೋಹವೋ
ಇಲ್ಲಾ ನಿಸರ್ಗದ ಸೊಗಸೋ..

2 comments:

Badarinath Palavalli said...

ಇಲ್ಲಿ ನೀರೆಂಬುದು ನೆಪ, ಮನಸ್ಸನ್ನು ಗುರಿ ಮಾಡಿ ಬಿಟ್ಟಂತಿದೆ ಭಾವ ಸಾಗರ ಬಾಣ.

Unknown said...

thanks sir..