Saturday, April 26, 2014

ಮಿತ್ರದ್ರೋಹಿ...

ನನ್ನ ಬೆರಳನ್ನೇ
ಹಿಡಿದು
ಮೇಲೇರ ಬಯಸಿದ
ನಿನಗೆ ನಾನೇ
ಮುಳ್ಳಾಗಿ ಕಂಡರೆ
ತಪ್ಪು ನನ್ನ ಕರುಣೆಯೋ
ಇಲ್ಲಾ ನಿನ್ನ ಮನದ ಕಿಚ್ಚೋ...??

ಬೇಡ, ಮಾಡದಿರು
ಗೆಳತಿ
ನೀನು ನನ್ನಿಂದ
ಕಲಿಯಬೇಕಾದ್ದು ಬಹಳಷ್ಟಿದೆ
ನನ್ನೊದೆದರೆ
ಆದೀಯೆ
ಅರೆ ಬೆಂದ ಮಡಕೆ....!!

2 comments:

Badarinath Palavalli said...

ಕೆಲವರು ಹಾಗೇ ಕಣ್ರೀ
ಅವರಿಗೆ ಏಣಿಯ ನೆನಪು ಏರಿದ ಮೇಲೆ ಇರದು, ಇದ್ದರೂ ಒದೆಯುವ ಕೀಳು ಬುದ್ದಿ.

Unknown said...

ಹೌದು..